OFFICIAL WEBSITE OF DR S. SRIKANTA SASTRI, M. A., D. Litt (1904 - 1974)

Natakarasasvarupa Nirupana by S. Srikanta Sastri

Natakarasasvarupa Nirupana by S. Srikanta Sastri
ಪ್ರಾಚೀನ ಭಾರತೇಯರ ಮತಾನುಸಾರವಾಗಿ ಸಕಲ ಕಲೆಗಳೂ ಐಹಿಕ ಸುಖದಾಯಕಗಳೇ ಅಲ್ಲದೆ ಪಾರಲೌಕಿಕ ಸುಖಗಳನ್ನು ಕೊಡುವವು. ದು:ಖನಿತ್ಯತೆಯನ್ನು ಪ್ರತಿಪಾದಿಸುವ ಸಾಂಖ್ಯ ಮತಾನುಸಾರವಾಗಿ ಈಷಾನ್ಮಾತ್ರವಾದರೂ ತ್ರಿಗುಣಾತ್ಮಕವಾದ ಮತ್ತು ದು:ಖಭಾಜನವಾದ ಸಾಮಾನ್ಯ ಪ್ರಪಂಚವನ್ನು ಮರೆತು ತ್ರಿಗುಣಾತೀಕವಾದ ಕಾವ್ಯಲೋಕದಲ್ಲಿ ಬ್ರಹ್ಮಾನಂದ ಸ್ವರೂಪವಾದ ಆನಾಂದಸ್ವಾದನೆಯೇ ಕಾವ್ಯವಲೋಕದ ಪ್ರಯೋಜನ. ವೇದಾಂತ ಮಾರ್ಗವನ್ನನುಸರಸಿ ಅಭಿನವಗುಪ್ತ ಪ್ರಭೃತಿಗಳು ಹೇಳುವದೇನೆಂದರೆ - ಸಾಮಾಜಿಕ ಮನಸ್ಸಿನಲ್ಲಿ ವಾಸನಾ ರೂಪವಾದ ಸ್ಥಾಯೀಭಾವಗಳು ಸೂತ್ರಧಾರಾದಿಗಳ ನಟನಾಭಿನಯ ದ್ವಾರದಿಂದ ಸ್ಪಷ್ಟವಾಗಿಯೂ ಮತ್ತು ಪುಷ್ಟವಾಗಿಯೂ ಪಾರಲೌಕಿಕವಾದ ಸಂತುಷ್ಟಿಯನ್ನುಉಂಟುಮಾಡುತ್ತದೆ. ಇದೇ ಸಚ್ಚಿದ್ರೂಪವಾದಾನಾಂದ. ಈ ಆನಂದದ ಭೇದವೇ "ಸೂಯಂ ಆನಂದಸಂಭೇದೋ ಭಾವಜ್ಞಿರನುಭೂಯತೇ" ಎಂಬಂತೆ, ರಸವಾಗಿರುವುದು.
ಈ ರಸವು ಸಾಮಾಜಿಕರಿಂದ ಹೇಗೆ ರುಚಿಸಲ್ಪಡುವುದು ಎಂಬುದನ್ನು ಕುರಿತು ನಾವು ಚರ್ಚಿಸಬೇಕಾಗಿದೆ. ಈ ವಿಷಯದಲ್ಲಿ ಭಟ್ಟಲೊಲ್ಲಟ, ಶ್ರೀಶಂಕುಕ, ಅಭಿನವಗುಪ್ತಾದಿ ಪ್ರಭೃತಿಗಳು ಬೇರೆ ಬೇರೆ ಅಭಿಪ್ರಾಯಗಳನ್ನು"ವಿಭಾವಾನುಭಾವವ್ಯಭಿಚಾರೀಭಾವಸಂಯೋಗಾದ್ರಸನಿಷ್ಪತ್ತಿ:" ಎಂಬ ಭರತಸೂತ್ರಕ್ಕೆ ವ್ಯಾಖ್ಯಾನ ಮಾಡುವ ಅವಸರದಲ್ಲಿ ಹೊರಪಡಿಸಿರುವರು. ಇದಂತಿರಲಿ, ಒಟ್ಟಿನಲ್ಲಿ
ಏತೇ ಚ ಸ್ಥಾಯಿನಸ್ಸರ್ವೇ ವಿಭಾವೈರ್ವ್ಯಭಿಚಾರಿಭೀ: ।
ಸಾತ್ವಿಕೈರನುಭಾವೈಶ್ಚನಟಾಭಿನಯಗೋಚರಾ: ।।
ಸಾಕ್ಷಾತ್ಕಾರಮಿವಾನೀತ: ಪ್ರಾಪಿತಾಸ್ವಾದುರೂಪತಾಮ್ ।
ಸಾಮಾಜಿಕಾನಾಂ ಮನಸಿ ಪ್ರಯಾಂತಿ ರಸರೂಪತಾಮ್ ।।
ಮತ್ತು
ರಾಮಾದೇರ್ಹ್ದಿ ಕಾರಣೊಪಜನಿತಃ ಕಾರ್ಯಯೈ: ಪ್ರತೀತಂ ಗತ: ।
ಸಂಪುಷ್ಟಸ್ಸಹಕಾರಿಭಿರ್ಜನಯತಿ ಸ್ಥಾಯೀಸುಖಂ ವಾsಸುಖಮ್ ।
ಭಾವಾನಾಮನುವರ್ಣನಾನುಕರನೈ: ಕಾವ್ಯೆಪಿ ನಾಟಯೇಪಿ ಚ
ವ್ಯಕ್ತೋsಯಂ ತು ನಿರಾಶ್ರಯಸ್ಸುಖಕರಸ್ಸಭ್ಯೈ: ರಸಶ್ಚರ್ವ್ಯತೇ ।।
Published by S. Srikanta Sastri in Rangabhumi - Vol 2 - Issue 9 - pp 139 - 142
©

Dr S. Srikanta Sastri
Page 1 of 6
Click on link to read full article