top of page

'Bharatheeya Sangeetadalli Maye' by Smt. S. Balamba

ಭಾರತೀಯ ಸಂಗೀತದಲ್ಲಿ ಮಾಯೆ

ಭಾರತೀಯ ಕಲೆಗಳಲ್ಲಿ ಸೌಂದರ್ಯೋಪಾಸನೆಯ ವಿಷಯವಾಗಿ ಪ್ರತಿಪಾದಿತವಾದ ಸಿದ್ಧಾಂತಾಗಳಲ್ಲಿ ವೈಜ್ಞಾನಿಕ, ತಾತ್ವಿಕ, ಮಾನಸಿಕ, ತಾರ್ಕಿಕ ಮತ್ತು ವಿಮರ್ಶಾತ್ಮಕ ದೃಷ್ಟಿಗಳಲ್ಲದೆ ಕೇವಲ ಭೌತದೃಷ್ಟಿಯೂ ಇದ್ದು, ಮುಖ್ಯವಾಗಿ ರಸಬ್ರಹ್ಮವಾದ, ನಾದಬ್ರಹ್ಮವಾದ ಮತ್ತು ವಾಸ್ತು ಬ್ರಹ್ಮವಾದಗಳು ಕಂಡುಬರುವುವು. ಭೌತದೃಷ್ಟಿಯಿಂದ ಕಲೆಯನ್ನು ಘನೀಕರಿಸುವ ವರ್ಣ, ಶಿಲೆ, ಧ್ವನಿ, ಸಾಹಿತ್ಯ, ದೇಹರಚನೆ ಇತ್ಯಾದಿಗಳನ್ನು ವಿಮರ್ಶಿಸಿರುವುದಲ್ಲದೆ, ಅಧ್ಯಾತ್ಮಿಕದೃಷ್ಟಿಯಿಂದ ಕಲೆಯಲ್ಲಿ ಪ್ರತಿಪಾದಿತವಾದ ವಸ್ತು, ವಿಧಾನ ಮತ್ತು ಅಂತಿಮಧ್ಯೇಯಗಳನ್ನೂ; ಮನಶ್ಯಾಸ್ತ್ರದೃಷ್ಟಿಯಿಂದ ರಸಸ್ವಾದನೆಯ ಒಂದೊಂದು ಹಂತದಲ್ಲಿಯೂ ವ್ಯಕ್ತವಾಗುವ ಅನುಭವಗಳನ್ನೂ; ಜ್ಞಾನದೃಷ್ಟಿಯಿಂದ ಸಹೃದಯನಿಗೂ ಕಲೆಯಲ್ಲಿ ಕಂಡುಬರುವ ವಸ್ತುವಿಗೂ ಇರುವ ಸಂಬಂಧ, ರಸಾಸ್ವಾದನೆಗೆ ಪೂರ್ವಭಾವಿಯಾಗಿರಬೇಕಾದ ಭಾವಶಬಲತೆ ಮತ್ತು ಸಂಸ್ಕಾರ, ಪ್ರತಿಬಿಂಬಗ್ರಹಣೆಯಲ್ಲಿ ಅವಶ್ಯಕವಾದ ಚಿತ್ತವೃತ್ತಿಗಳು, ಅಂತಹ ಚಿತ್ತವೃತ್ತಿಗಳ ಪರಸ್ಪರ ಸಂಬಂಧ ಮತ್ತು ಫಲ, ಮತ್ತು ರಸಸ್ವಾದನೆಯಲ್ಲಿ ದೇಶ, ಕಾಲ, ವ್ಯಕ್ತಿಗಳ ಉದ್ವಾಸನಕ್ರಮ; ತಾರ್ಕಿಕದೃಷ್ಟಿಯಿಂದ ಸತ್ಯ, ಅಸತ್ಯ, ಸಂದೇಹ, ಭ್ರಾಂತಿ ಇತ್ಯಾದಿಗಳ ನಿಶ್ಚಯ; ವಿಮರ್ಶಾದೃಷ್ಟಿಯಿಂದ ಕಲಾಪ್ರತಿಪಾದನೆಯಲ್ಲಿ ಶಾಶ್ವತಾಂಶದ ಅನ್ವೇಷಣೆ - ಇವೆಲ್ಲವೂ ಅವಶ್ಯವೆಂದು ಭಾವಿಸಲಾಗಿದೆ. ಅತ್ಯಂತ ಪ್ರಾಚೀನ ಕಲಾವಿಷಯಕವಾದ ಸಿದ್ದಾಂತಗಳಲ್ಲಿ ಕೇವಲ ಭೌತ ಅಥವಾ ಇಂದ್ರಿಯಸುಖ, ಮತ್ತು ನೀತಿಬೋಧೆಯೇ ಧ್ಯೇಯಗಳೆಂದು ಹೇಳಲಾಗಿದ್ದಿತು. ಆದರೆ ಇವು ವಿವೇಚನಾಪರರಿಗೆ ತೃಪ್ತಿಕೊಡದೆ ಇದ್ದುದರಿಂದ, ಕಲಾವಿದನ ದೃಷ್ಟಿಯಿಂದ ಅನುಕರಣ, ಮಾಯೆ ಮತ್ತು ಆನಂದಾನುಭವವೆಂಬ ಮೂರು ತತ್ತ್ವಗಳು ಪ್ರಚಾರಕ್ಕೆ ಬಂದವು.

Published in S. V. Ranganna's Felicitation Volume 'Bagina'

©

'Bharathiya Sangeetadalli Maye' by S. Balamba

Page 1 of 6

Click on link to read full article

bottom of page