OFFICIAL WEBSITE OF DR S. SRIKANTA SASTRI, M. A., D. Litt (1904 - 1974)

'kannadandhra kavigalu' by s. srikanta sastri (ಕನ್ನಡಾಂಧ್ರ ಕವಿಗಳು)

'Kannadandhra Kavigalu' by S. Srikanta Sastri (ಕನ್ನಡಾಂಧ್ರ ಕವಿಗಳು)
ಆಂಧ್ರವಾಂಗ್ಮಯಪ್ರಪಂಚಕ್ಕೆ, ಕೀರ್ತಿಶೇಷರಾದ ವಂಗೂರು ಸುಬ್ಬರಾಯರು, ಕೆ. ವಿ. ಲಕ್ಷ್ಮಣರಾಯರು ತಮ್ಮ ವಾಂಗ್ಮಯಚರಿತ್ರಪರಿಶೋಧನೆಯಿಂದ ಮಾಡಿದ ಉಪಕಾರವು ಮಹತ್ತರವಾದುದು. ಆದರೆ ಸ್ವಭಾಷಾಭಿಮಾನವೆಂಬ ಆವೇಶದಿಂದ ಸೋದರ ಭಾಷೆಯ ವಿಷಯವಾಗಿ ಪ್ರಚುರ ಪಡಿಸಿರುವ ಅಭಿಪ್ರಾಯಗಳು ಎಷ್ಟು ಮಟ್ಟಿಗೂ ಸ್ವೀಕರಿಸಲರ್ಹವಾದುವುಗಳಲ್ಲ. ಲಕ್ಷ್ಮಣರಾಯರು, ಕನ್ನಡದಲ್ಲಿನ ಪ್ರಥಮ ಪುರುಷ ಏಕವಚನವಾದ ಆನ್ ಮತ್ತು ನಾನ್ ಎಂಬ ಪದಗಳಲ್ಲಿ ಆನ್ ತಮಿಳರಿಂದಲೂ ನಾನ್ ಎಂಬುದು ತೆಲುಗುನಿಂದಲೂ ಬಂದವೆಂದು, ಆ ಕಾರಣದಿಂದಲೆ ಭಟ್ಟಾಕಳಂಕನು ೨೮೮ನೆಯ ಸೂತ್ರವಾದ "ಆದೆನ:" ಎಂಬುದರ ವೃತ್ತಿಯಲ್ಲಿ "ಆನ್" ಎಂಬುದನ್ನೇ ಅನುಮೋದಿಸಿದರೂ ವ್ಯಾಖ್ಯೆಯಲ್ಲಿ ನಾನ್ ಎಂಬುದನ್ನು ಒಪ್ಪಿಕೊಂಡನೆಂದು ಹೇಳಿರುವರು. ವಿಚಾರಮಾಡಿದಲ್ಲಿ ಭಟ್ಟಾಕಳಂಕನ ಉತ್ತರ ಮಾರ್ಗ ದಕ್ಷಿಣ ಮಾರ್ಗಗಳು ತೆಲಗು ತಮಿಳು ವ್ಯಾಕರಣ ವಿಧಿಗೆ ಸೇರಿದವಲ್ಲ. "ತಥಾಪಿ ಸ ಕೈಶ್ಚಿದೇವ ಅಂಗಿಕ್ರೀಯತೇ ಉತ್ತರಮಾರ್ಗಾನುಗಾಮಿಭೀ: ಕವೀಶ್ವರೈ: ನ ಸರ್ವ:, ದಕ್ಷಿಣಮಾರ್ಗನುಯಾಯಿಭಿ: ತೈರನಂಗಿಕಾರಾತ್, ಎಸ್ ಪಕ್ಷಪಾತಿನೋ ಹಿ ದಾಕ್ಷಿಣಾತ್ಯಾ: ಕವಿಜನಾ ಇತಿ ದಕ್ಷಿಣೋತ್ತರ ಮಾರ್ಗಭೇದಭಿನ್ನಪ್ರಯೋಗಚಾತುರೀಪ್ರಪಂಚೋ ನೃಪತುಂಗಗ್ರಂಥೇ ದ್ರಷ್ಠವ್ಯ ಇತಿ ।। ನೃಪತುಂಗನ ಗ್ರಂಥವಾದ ಕವಿರಾಜಮಾರ್ಗದಲ್ಲಿ ದಂಡಿಯನ್ನನ್ನುಸರಿಸಿರುವದರಿಂದ, ಉತ್ತರದಕ್ಷಿಣಮಾರ್ಗಗಳು ಆಂಧ್ರ ದ್ರಾವಿಡಭಾಷೆಗಳಲ್ಲವೆಂದು ನಿರ್ಧರಿಸಭಹುದು. ಮತ್ತು ತೆಲುಗಿನಲ್ಲಿ ದಕ್ಷಿಣ ಮಾರ್ಗದ ರೂಪವಾದ "ಏನು"ಎಂಬುದು ಪ್ರಚಾರದಲ್ಲಿರುವುದರಿಂದಲೂ, ದಕ್ಷಿಣ ಮಾರ್ಗವೆಂದಣಿಸಿದ ತಮಿಳಿನಲ್ಲಿ ನಾನ್ ರೂಪವೂ ಇರುವುದರಿಂದ, ಲಕ್ಷ್ಮಣರಾಯರ ಸಿದ್ಧಾಂತವು ಎಷ್ಟು ಮಟ್ಟಿಗೂ ವಿಶ್ವಸನೀಯವಲ್ಲ. ವಂಗೂರು ಸುಬ್ಬರಾಯರ ಸಿಧ್ಧಾಂತಗಳಾದರೋ ಅತಿ ವಿಚಿತ್ರವಾಗಿವೆ. ತಮ್ಮ ಆಂಧ್ರವಾಂಗ್ಮಯಚರಿತ್ರೆಯಲ್ಲಿ ಹೀಗೆ ಬರೆದಿರುವರು: - ಕರ್ನಾಟಕ ವಾಂಗ್ಮಯದಲ್ಲಿ ಮುಖ್ಯವಾದುದೆಲ್ಲವನ್ನು ಆಂಧ್ರರೇ ರಚಿಸಿದರೆಂದು ಮಾತ್ರ ನಂಬಬೇಕು. 'ಪೂಜ್ಯಪಾದ, ದಂಡಿ, ನಾಗಾರ್ಜುನ, ಆದಿಪಂಪ, ಪೊನ್ನ, ನಾಗವರ್ಮ, ರನ್ನ, ರಾಜಾದಿತ್ಯ, ಮೈದುನರಾಮಯ್ಯ, ಮೂಳಿಗಯ್ಯ, ಮರಳದೇವ, ಮಲ್ಲಿಕಾರ್ಜುನ, ಪಂಡಿತಾರಾಧ್ಯ, ಹರೀಶ್ವರ ರಾಘವ, ಕೆರೆಯ ಪದ್ಮರಸ, ಚಕ್ರಪಾಣಿ ರಂಗನಾಥ, ಪೂಲಾಲ್ಪ ದಂಡನಾಧ, ಭೀಮಕವಿ, ಎಂಬುವರು ಮುಖ್ಯರು.'
Published in Jaya Karnataka - Vol 4, Issue 11, pp 692 - 695 by S. Srikanta Sastri
©

S. Srikanta Sastri, Esq
Page 1 of 4
Click on link to read full article
%202_JPEG.jpeg)
