OFFICIAL WEBSITE OF DR S. SRIKANTA SASTRI, M. A., D. Litt (1904 - 1974)

Bharatheya Sahithyashastra (1949) (ಭಾರತೇಯ ಸಾಹಿತ್ಯಶಾಸ್ತ್ರ)

Bharatheya Sahithyashastra (1949) (ಭಾರತೇಯ ಸಾಹಿತ್ಯಶಾಸ್ತ್ರ)
ಆನಂದವರ್ಧನಾಚಾರ್ಯರ ಕಾಲದಿಂದೀಚೆಗೆ (೮ನೆಯ ಶತಮಾನ) ಕಾವ್ಯದಲ್ಲಿ ವ್ಯಂಗ್ಯವೇ ಮುಖ್ಯವಾಗಿ ಅವಶ್ಯವೇಂದಾಂಗೀಕರಿಸಲ್ಪಟ್ಟಿದೆ. ಪ್ರಾಚೀನರನೆೇಕರು ಪ್ರಧಾನ್ಯಾಪ್ರಧಾನ್ಯ ತಾರತಮ್ಯ ಜ್ಞಾನವಿಲ್ಲದೆ ವಸ್ತ್ವಲಂಕಾರ ಪದಗಳನ್ನು ಪರ್ಯಾಯ ಪದಗಳಾಗಿ ಉಪಯೋಗಿಸಿರುವರು. ಆದರೆ ಸಾಹಿತ್ಯಶಾಸ್ತ್ರ ಚರಿತ್ರೆಯಲ್ಲಿ ಧ್ವನಿಪ್ರಾಧಾನ್ಯವನ್ನೂ, ರೀತಿವಸ್ತ್ವಲಂಕಾರ ಮತಗಳಿಗೆ ಇರುವ ಭೇದವನ್ನು ಸೂಚಿಸಬೇಕಾಗಿದೆ. ಅಭಿನವಗುಪ್ತಾಚಾರ್ಯರು ಗುಣಾಲಂಕಾರಗಳು ಹೇಗೆ ಧ್ವನಿಗೆ ವ್ಯತಿರಿಕ್ತವೆಲ್ಲೆಂದು ಸೂಚಿಸಿರುವರು. "ಶಬ್ದಾರ್ಥಯೋಶ್ಚಾರುತ್ವಂ ಸ ಧ್ವನಿ:। ತಚ್ಚಾರುತ್ವಂ ದ್ವಿವಿಧಮ್ । ಸ್ವರೂಪಮಾತ್ರ ನಿಷ್ಠಮ್, ಸಂಘಟನಾಶ್ರಿತಂ ಚ - ತತ್ರ ಶಬ್ದಾನಾಮ್ ಸ್ವರೂಪಮಾತ್ರಕೃತಂ ಚಾರುತ್ವಂ ಶಬ್ಬಾಲಂಕಾರೇಭ್ಯ: । ಸಂಘಟನಾಶ್ರಿತಂ ತು ಶಬ್ದಗುಣೇಭ್ಯ ಏವಮಥಾರ್ನಾಮ್ ಚಾರುತ್ವಮ್ ಸ್ವರೂಪಮಾತ್ರನಿಷ್ಠಮ್ ಉಪಮಾದಿಭ್ಯ - ಸಂಘಟನಾಪರ್ಯವಸಿತಂ ತ್ವರ್ಥಗುಣೇಭ್ಯ ಇತಿ ನ ಗುಣಲಂಕಾರವ್ಯತಿರಿಕ್ತೂ ಧ್ವನಿ: ಕಶ್ಚಿದಿತಿ" ಧ್ವನಿಯು ಗುಣಲಂಕಾರಗಳಿಗೆ ವ್ಯತಿರಿಕ್ತವಲ್ಲ. ಚಾರುತ್ವವು ಸ್ವರೂಪಮಾತ್ರವಾಗಿಯೂ ಸಂಘಟನೆಯಿಂದಲೂ ಉಪಮಾದ್ಯಲಂಕಾರಗಳಿಗೆ ಪರಿಣಮಿಸುವುದು. ಇನ್ನು ಧ್ವನಿ ರೀತಿ ಮತಗಳ ಭೇದವನ್ನು ನೋಡೋಣ. "ರೀತಿಧ್ವನಿವಾದಮತಯೋರಿಯಂಸ್ತು ಭೇದಃ - ತತ್ರ ಪ್ರಥಮೋ ರೀತಿರಾತ್ಮಾ ಕಾವ್ಯಸ್ಯ ತದ್ವ್ಯವಹಾರಪ್ರಯೋಜಕಾ: ಗುಣಾ:। ಉಭಯತ್ರಾಪಿ - ಆತ್ಮನಿಷ್ಠಾಗುಣಾ: ಉಭಯತ್ರಾಪಿ "ಶಬ್ದಾರ್ಥಯುಗಳಂ ಶರೀರಂ" ತನ್ನಿಷ್ಠಾಲಂಕಾರಂ ಇತಿ ಚ ಸರ್ವಮವಿಶಿಷ್ಟಮ್". ಗುಣಾಲಂಕಾರಾಮತಗಳನ್ನು ಹೋಲಿಸಿದರೆ ಗುಣವೇ ಸ್ವೀಕರಣೀಯವೆಂದು ಕಂಡುಬರುವುದು. ಗುಣಗಳು ರಸಧರ್ಮಗಳಾಗಿಯೂ, ರಸಾಲಂಬಿಗಳಾಗಿಯೂ ನಿಯಮದಿಂದ ರಸೋತ್ಪಾದನೆ ಮಾಡುವದಾಗಿಯು, ಸ್ವತಃಸಿದ್ಧವಾದ ಅಲಂಕಾರಗಳಾದರೇ ಶಬ್ಧಾರ್ಥಧರ್ಮಗಳು, ರಸಾಲಂಬನೆ ಇಲ್ಲದೆಯೂ ರಸೋತ್ಕರ್ಷಣೆಯಲ್ಲಿ ರಸೋಪಕಾರಕವಾಗಿ ಇರುವುವು. ನಿಯಮರಹಿತವಾಗಿಯೂ, ಶಬ್ದಾರ್ಥ ಮೂಲಕ ರಸೋಪಕಾರಗಳಾಗಿರುವದರಿಂದಲೂ ಗುಣಗಳಂತೆ ಬಹುಕೃತವಾದುದಲ್ಲ. ಆದುದರಿಂದ ಉತ್ತಮ ಕಾವ್ಯದಲ್ಲಿ - "ತದದೊಶೌ ಶಬ್ಧಾರ್ಥ ಸ ಗುಣಾವನಲಂಕೃತೀ ಪುನಃ ಕ್ವಾಪಿ" ಎಂಬ ಸೂತ್ರ ಪ್ರಕಾರ, ರಸಾಭಾವಾದಿಗಳು ಸ್ಪಷ್ಟವಾಗಿದ್ದಲ್ಲಿ, ಅಲಂಕಾರವಿಲ್ಲದಿದ್ದರೂ ಕಾವ್ಯತ್ವವು ಸಿದ್ಧಿಸುತ್ತದೆ.
Published by S. Srikanta Sastri in Rangabhumi - Vol 2 - Issue 10 - Pp 149 - 152
©

S. Srikanta Sastri, Esq
Page 1 of 7
Click on link to read full article