OFFICIAL WEBSITE OF DR S. SRIKANTA SASTRI, M. A., D. Litt (1904 - 1974)

Biography of 'Asthan Mahavidwan Motaganahalli Ramasesha Sastri' by S. Srikanta Sastri (1934)

Biography of 'Asthan Mahavidwan Motaganahalli Ramasesha Sastri' by S. Srikanta Sastri (1934)
ವೇ।। ರಾಮಶೇಷ ಶಾಸ್ತ್ರಿಗಳವರು ೧೮೬೭ನೆಯ ಇಸ್ವಿ ಸೆಪ್ಟೆಂಬರ್ ೨೪ಕ್ಕೆ ಸರಿಯಾದ ಅಕ್ಷಯ ಸಂವತ್ಸರ ಭಾದ್ರಪದ ಶುದ್ಧ ಚತುರ್ದಶಿ ರವಿವಾರದಲ್ಲಿ, ಮಾಗಡಿ ತಾಲ್ಲೂಕಿಗೆ ಸೇರಿದ ಮೋಟಗಾನಹಳ್ಳಿಯೆoಬ ಗ್ರಾಮದಲ್ಲಿ ಜನ್ಮವೆತ್ತಿದರು. ಇವರು ಆಂಧ್ರದಲ್ಲಿ ಮುಲಕನಾಡು ಪಂಗಡಕ್ಕೆ ಸೇರಿದ ವೆಲ್ಲಾಲ ವಂಶಸ್ಥರು ಮತ್ತು ಭಾರದ್ವಾಜಗೋತ್ರಕ್ಕೆ ಸೇರಿದವರು. 'ಸರಸ ಕುಲಾನಂದ ಭಾಣ', 'ಭಾಗವತ ಚಂಪು', 'ನೀಲಕಂಠವಿಜಯ ವ್ಯಾಖ್ಯಾನ' - ಇವೇ ಮೊದಲಾದ ಗ್ರಂಥಗಳನ್ನು ರಚಿಸಿ ಸುಪ್ರಸಿದ್ಧರಾಗಿರುವ 'ಅಭಿನವ ಕಾಳಿದಾಸ'ರು ಇವರ ಪೂರ್ವಿಕರು. ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರವರ ಕಾಲದಲ್ಲಿ ಉದ್ದಾಮಪಂಡಿತರೆಂದು ಪ್ರಖ್ಯಾತಿಗೊಂಡು ಅನೇಕ ಸ್ತೋತ್ರ ಕದಂಬಗಳನ್ನೂ, ಗೀತೆಗಳನ್ನೂ ರಚಸಿ ಬ್ರಹ್ಮೀಭೂತರಾಗಿದ್ದ ವೇ।। ಮಹದೇವ ಶಾಸ್ತ್ರಿಗಳವರೇ ಇವರ ಪಿತಾಮಹರು. ಶಾಸ್ತ್ರಿಗಳವರು ಐದು ಜನ ಅಣ್ಣತಮ್ಮಂದಿರಿಂದ ಪೈಕಿ ನಾಲ್ಕನೆಯವರು. ಆಸ್ಥಾನ್ ವಿದ್ವಾನ್ ದಿವಂಗತ ಪಂಡಿತ ಮಹದೇವ ಶಾಸ್ತ್ರಿಗಳೇ ಎರಡನೆಯವರು. ಹರಿಶ್ಚಂದ್ರ, ಇಂದ್ರಸಭಾ, ಪಾಂಡು ವಿಜಯ ಮೊದಲಾದ ಕನ್ನಡ ನಾಟಕ ಪ್ರಾಣೇತೃಗಳೂ, ಪ್ರಸಿದ್ಧಿ ವಿದ್ವಾಂಸರೂ ಆದ ವೇ।। ಶಂಕರ ಶಾಸ್ತ್ರಿಗಳವರೇ ಮೂರನೆಯವರು. ವೇ।। ರಾಮಶೇಷ ಶಾಸ್ತ್ರಿಗಳವರು ೧೮೬೭ನೆಯ ಇಸ್ವಿ ಸೆಪ್ಟೆಂಬರ್ ೨೪ಕ್ಕೆ ಸರಿಯಾದ ಅಕ್ಷಯ ಸಂವತ್ಸರ ಭಾದ್ರಪದ ಶುದ್ಧ ಚತುರ್ದಶಿ ರವಿವಾರದಲ್ಲಿ, ಮಾಗಡಿ ತಾಲ್ಲೂಕಿಗೆ ಸೇರಿದ ಮೋಟಗಾನಹಳ್ಳಿಯೆoಬ ಗ್ರಾಮದಲ್ಲಿ ಜನ್ಮವೆತ್ತಿದರು. ಇವರು ಆಂಧ್ರದಲ್ಲಿ ಮುಲಕನಾಡು ಪಂಗಡಕ್ಕೆ ಸೇರಿದ ವೆಲ್ಲಾಲ ವಂಶಸ್ಥರು ಮತ್ತು ಭಾರದ್ವಾಜಗೋತ್ರಕ್ಕೆ ಸೇರಿದವರು. 'ಸರಸ ಕುಲಾನಂದ ಭಾಣ', 'ಭಾಗವತ ಚಂಪು', 'ನೀಲಕಂಠವಿಜಯ ವ್ಯಾಖ್ಯಾನ' - ಇವೇ ಮೊದಲಾದ ಗ್ರಂಥಗಳನ್ನು ರಚಿಸಿ ಸುಪ್ರಸಿದ್ಧರಾಗಿರುವ 'ಅಭಿನವ ಕಾಳಿದಾಸ'ರು ಇವರ ಪೂರ್ವಿಕರು. ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರವರ ಕಾಲದಲ್ಲಿ ಉದ್ದಾಮಪಂಡಿತರೆಂದು ಪ್ರಖ್ಯಾತಿಗೊಂಡು ಅನೇಕ ಸ್ತೋತ್ರ ಕದಂಬಗಳನ್ನೂ, ಗೀತೆಗಳನ್ನೂ ರಚಸಿ ಬ್ರಹ್ಮೀಭೂತರಾಗಿದ್ದ ವೇ।। ಮಹದೇವ ಶಾಸ್ತ್ರಿಗಳವರೇ ಇವರ ಪಿತಾಮಹರು. ಶಾಸ್ತ್ರಿಗಳವರು ಐದು ಜನ ಅಣ್ಣತಮ್ಮಂದಿರಿಂದ ಪೈಕಿ ನಾಲ್ಕನೆಯವರು. ಆಸ್ಥಾನ್ ವಿದ್ವಾನ್ ದಿವಂಗತ ಪಂಡಿತ ಮಹದೇವ ಶಾಸ್ತ್ರಿಗಳೇ ಎರಡನೆಯವರು. ಹರಿಶ್ಚಂದ್ರ, ಇಂದ್ರಸಭಾ, ಪಾಂಡು ವಿಜಯ ಮೊದಲಾದ ಕನ್ನಡ ನಾಟಕ ಪ್ರಾಣೇತೃಗಳೂ, ಪ್ರಸಿದ್ಧಿ ವಿದ್ವಾಂಸರೂ ಆದ ವೇ।। ಶಂಕರ ಶಾಸ್ತ್ರಿಗಳವರೇ ಮೂರನೆಯವರು.
ಬಾಲ್ಯದಲ್ಲಿಯೇ ಮಾತೃವಿಯೋಗವಾದುದರಿಂದಲೂ, ತಂದೆಯವರು ವೃಧಾಪ್ಯದಲ್ಲಿದ್ದು ಮನೆಯಲ್ಲಿ ಸರಿಯಾದ ಪೋಷಕರಾರೂ ಇಲ್ಲದೇ ಹೋದುದರಿಂದಲೂ ತಮ್ಮ ೧೫ - ೧೬ನೆಯ ವಯಸ್ಸಿನವರೆಗೂ ಇವರೇ ಮನೆಗೆಲಸಗಳನ್ನೂ ನಿರ್ವಹಿಸಬೇಕಾಯಿತು.
Published in Kannada Sahitya Parishad Patrike (1934) - Vol. 19 - Issue 2 - pp 171 - 175.
©

Asthan Vidwan Motaganahalli Mahadeva Sastri
Page 1 of 5
Click on link to read full article