top of page

'Padyapushpanjali' by S. Subramanya Sastri

'Padyapushpanjali' by Motaganahalli S. Subramanya Sastri (1941)

ಪದ್ಯ ಪುಷ್ಪಾoಜಲಿ

'ಶ್ರೀ' ಯವರ ೫೭ನೆಯ ಹುಟ್ಟಿದ ಹಬ್ಬದಲ್ಲಿ ಒದ್ದಿದ್ದು

ಆವಳ್ ಭಕ್ತರ ಚಿತ್ತದೊಳ್ ನೆಲಸುತಂ ಸುಜ್ಞಾನಮಂ ನೀಡುತಂ
ಭಾವಾಲಂಕೃತ ಕಾವ್ಯ ನಿರ್ಮಿತಿಗಳಿಮ್ ತಾನಿರ್ಪುದಂ ತೋರ್ದು ಸದ್ –
ಭಾವಾರಾಧಿತೆಯಾಗಿ ಲೋಕಭರಣಕ್ಕಾಧಾರೆಯಾಗಿರ್ಪಳೋ
ಆ ವಾಗ್ದೇವತೆಯೀಗೆ ಸರ್ವಶುಭಮಂ ಶ್ರೀಯಂಕಿತಂಗಾವಾಗಂ

ನವ ಕರ್ನಾಟ ಸರಸ್ವತೀ ವಿಭವಮಂ ಸೋತ್ಸಾಹದಿಂ ಪೆರ್ಚಿಸು
ತ್ತವನೀಭಾಗದೊಳಿಂದು ಕನ್ನಡಕುಲಂ ಪೆ೦ಪೊಂದಿ ವೈಶಿಷ್ಟ್ಯದಿಮ್
ಭುವನಖ್ಯಾತಮದಾಗಲಾವ ನಿಪುಣಂ ಸಂಸ್ಫೂರ್ತಿಯನ್ನಿತ್ತನೋ
ಕವಿತಾಕೋವಿದನಾತನೀತನೆ ವಲಂ ಶ್ರೀಕಂಠ ವಿದ್ವದ್ವರಂ

ವೈದಿಕ ಲೌಕಿಕ ಸಾಹಿ
ತ್ಯೋದಧಿಯಂ ಮಥಿಸಿ ನೂತ್ನ ಬೋಧಾಮೃತಮಂ
ಶೋಧಿಸಿ ಕನ್ನಡ ಲೋಕ
ಕ್ಕಾದಂ ತಂದೆರದ ಮಾನ್ಯನೀ ಗುರುವರ್ಯಮ್

ಪಲವುಮ್ ಭಾಷೆಗಳೋದಿ ವಂದ ತಿಳಿವಂ ತಾಯ್ನಾಡ ಸಾಹಿತ್ಯದೊಳ್
ನೆಲಸಲ್ ಸಂತತಮರ್ತಿಯಿಂ ಶ್ರಮಿಸುತಂ ಸಚ್ಚಿಷ್ಯರಂ ಪ್ರೇರಿಸು
ತ್ತೊಲವಿಂ ನಾಡಿಗರೆಲ್ಲ ನಾಡನುಡಿಯಂ ಸೇವಿಪ್ಪವೂಲ್ ಯೋಜಿಸಲ್
ನಲವಿಂ ದೀಕ್ಷೆಯನಾಂತು ನೋಂತ ಪಿರಿಯನ್ ಶ್ರೀಕಂಠನೇಮ್ ಧನ್ಯನೋ

ವಿಜಯಿಕೆ ಬುಧತೋಷಮ್ ರಮ್ಯ ಕರ್ಣಾಟ ದೇಶಂ
ವಿಜಯಿಕೆ ಕೃತಿಹಾರಂ ಭವ್ಯ ಸಂಭಾವನಾಖ್ಯಾ೦
ವಿಜಯಿಕೆ ಸಿರಿಕಂಠಮ್ ಕನ್ನಡಾಚಾರ್ಯವರ್ಯಮ್
ವಿಜಯಿಕೆ ಚಿರಕಾಲಂ ಕನ್ನಡಂ ಸರ್ವಸೇವ್ಯಮ್

- ಎಂ. ಎಸ್. ಸುಬ್ರಹ್ಮಣ್ಯಶಾಸ್ತ್ರಿ

Published in the Kannada Sahitya Parishat Weekly Newsletter (Sept. 19, 1941) in dedication to B. M. Srikantaiah's 57th birthday, glorifying the history, heritage and future of Kannada language and her people.

©

Kannada Sahitya Parishat (Bangalore)

Page 1 of 1

bottom of page