OFFICIAL WEBSITE OF DR S. SRIKANTA SASTRI, M. A., D. Litt (1904 - 1974)

Book Review of Subba Rao's “Mysuru Arasara Eradu Shatamanagala Alike” by S. Srikanta Sastri

Book Review of Subba Rao's “Mysuru Arasara Eradu Shatamanagala Alike” by S. Srikanta Sastri
Dr S. SRIKANTA SASTRI’S
REVIEW
OF
S. SUBBA RAO’S KANNADA BOOK
“MYSURU ARASARA ERADU SHATAMANAGALA ALIKE”
(ENGLISH: “TWO CENTURIES OF RULE BY THE MYSORE WODEYARS”)
PUBLISHED IN ‘PRABUDDHA KARNATAKA’, [UGADI ISSUE]
(MARCH 1933, Vol. 15)
೧೩. ಮೈಸೂರು ಒಡೆಯರ ಎರಡು ಶತಮಾನಗಳ ಆಳಿಕೆ (೧೫೬೫ - ೧೭೬೧): ೧ನೆಯ ಭಾಗ, ರಾಜ್ಯಭಾರಕ್ರಮ: - ಲೇಖಕರು: ಶ್ರೀ ಮಾನ್ ಏನ್. ಸುಬ್ಬರಾವ್, ಎಂ. ಎ. ಅವರು; ಬೆಲೆ ೦ - ೪ - ೦
ಮೈಸೂರು ದೇಶದ ಆಧುನಿಕ ಚರಿತ್ರೆಯಲ್ಲಿ ಈಚೆಗೆ ಪರಿಶೋಧನೆಯು ಹೆಚ್ಚಾಗಿ ಬೆಳೆದು, ರಾವ್ ಸಾಹೇಬ್ ಹಯವದನರಾಯರಿಂದ ಕ್ರೋಡೀಕರಿಸಲ್ಪಟ್ಟ "ಮೈಸೂರು ಗೆಜಿಟೀರ್" ನೂತನ ಸಂಪುಟಗಳಲ್ಲಿಯೂ. ಡಾ।। ಕೆ. ಏನ್. ವೆಂಕಟಸುಬ್ಬಶಾಸ್ತ್ರಿ, ಎಮ್. ಎ., ಪಿಎಚ್. ಡಿ. ಅವರ "The Administration of Mysore under Sir Mark Cubbon” ಎಂಬ ಗ್ರಂಥದಲ್ಲಿಯೂ, ಕೆಲವು ಪತ್ರಿಕೆಗಳಲ್ಲಿ ಪ್ರಕಟಿತವಾದ ಲೇಖನಗಳಲ್ಲಿಯೂ, ಅನೇಕ ನೂತನಾಂಶಗಳು ಹೊರಪಟ್ಟಿವೆ. ಆದರೆ ಇದುವರೆಗೂ ಕನ್ನಡದಲ್ಲಿ ಪಾಶ್ಚಾತ್ಯ ವಿಮರ್ಶಕ್ರಮವನ್ನನುಸರಿಸಿ ಬರೆದ ಗ್ರಂಥಗಳು ಅತಿ ವಿರಳವಾದುದರಿಂದ ಮ।। ರಾ।। ಏನ್. ಸುಬ್ಬರಾಯರ ಪ್ರಯತ್ನವು ಶ್ಲಾಘನೀಯವಾಗಿದೆ. ಪ್ರಥಮತಃ ಆಧಾರಗಳನ್ನು ಪ್ರಚುರಪಡಿಸಿ ತದನಂತರ ತಮ್ಮ ನಿರ್ಣಯಗಳನ್ನು ಪ್ರಕಾಶ ಪಡಿಸಿದ್ದರೆ ಮತ್ತಷ್ಟು ಕಳೆಗಟ್ಟುತ್ತಿದ್ದಿತು.
ಈ ಗ್ರಂಥದಲ್ಲಿ ರಾಜ್ಯಭಾರಕ್ರಮವನ್ನು ಚರ್ಚಿಸುವಾಗ, ರಾಜ, ಯುವರಾಜ, ದಳವಾಯಿ, ಮಂತ್ರಾಲೋಚನ ಸಭೆ, ಸೇನೆ, ಸ್ಥಳೀಯ ಆಡಳಿತ, ಸುಧಾರಣೆಗಳು ಮೊದಲಾದ ವಿಷಯಗಳನ್ನು ಸಪ್ರಮಾಣವಾಗಿ ಚರ್ಚಿಸಿರುವರು.
PUBLISHED IN ‘PRABUDDHA KARNATAKA’, [UGADI ISSUE]
(MARCH 1933, Vol. 15)
©

Krishnaraja Wodeyar III
Page 1 of 4
Click on link to read full article
%20Book%20Front%20Cover_JPEG.jpeg)
