OFFICIAL WEBSITE OF DR S. SRIKANTA SASTRI, M. A., D. Litt (1904 - 1974)

'Itihasa Sarvagna' by Dr S. M. Vrushabendra Swamy (book - 'Shatamanada Kelavu Smaraneeyaru')

'Itihasa Sarvagna' by Dr S. M. Vrushabendra Swamy (book - 'Shatamanada Kelavu Smaraneeyaru')
ಇತಿಹಾಸ ಸರ್ವಜ್ಞ
ಡಾ।। ಎಸ್. ಶ್ರೀಕಂಠ ಶಾಸ್ತ್ತ್ರೀಗಳು
ಭಾರತೀಯ ಹಾಗು ಕರ್ನಾಟಕ ಇತಿಹಾಸ - ಸಾಹಿತ್ಯ - ಸಂಸ್ಕೃತಿ ಸಂಶೋಧನೆಯ ವಿಶಾಲಕಾಲದಲ್ಲಿ ಹೊಳೆಹೊಳೆವ "ಬೆಳ್ಳಿಚುಕ್ಕಿ"ಗಳು ಅನೇಕ, ಶತಶತಮಾನಗಳ ಮಹತ್ವದ ಇತಿಹಾಸ ಹೊಂದಿರುವ ಈ ವಿಶಾಲಭಾರತದ ಚರಿತ್ರೆ ಬಹುವಿಸ್ತಾರವಾದುದು; ಸಂಸ್ಕೃತಿ ಆಳವಾದುದು; ಸಾಹಿತ್ಯ ವೈವಿಧ್ಯಮಯವಾದುದು. ಜಗತ್ತಿನ ಜ್ಞಾನ ಭಂಡಾರಕ್ಕೆ ಭಾರತ ನೀಡಿದ ಕೊಡುಗೆ ಅಪಾರ. ಕರ್ನಾಟಕ ಕಾಣಿಕೆ ವಿಶೇಷ ಈ "ಜ್ಞಾನ"ದ ಸತ್ಯ ಸಂಶೋಧನೆ, ಇತಿಹಾಸದ ಆವಿಷ್ಕಾರ, ಸಂಸ್ಕೃತಿ ಸಂಶೋಧನೆ"ಯನ್ನು ನಿರಂತರವಾಗಿ, 'ಜೀವನವ್ರತ'ವೆನ್ನುವಂತೆ ಕೃಷಿಗೈದು, ಮಹತ್ವದ ತಿಳುವಳಿಕೆಯನ್ನು ವಿಸ್ತರಿಸಿದ ಚಿಂತನೆಯ ತೆರೆ, ಎಬ್ಬಿಸಿದ, ವಿನೂತನ ಕೋಡುಗುಗೆಗಳನ್ನು ನೀಡಿದ, ಪ್ರಾಥ:ಸ್ಮರಣೀಯ ಪುಣ್ಯ ಪವಾಡ ಸದೃಶವಾದುದು. ಅತ್ಯಧ್ಬುತವಾದುದು. ಅಂಥ ಮಹಾತ್ಮರನ್ನು ನೆನೆವುದೇ ಪುಣ್ಯ. ಅವರ "ಸಾಧನೆಗಳನ್ನು ಸಮೀಕ್ಷಿಸುವುದೇ ಸುಕೃತ. ಇಂಥ "ಜ್ಞಾನಾನ್ವೇಷಕ - ನಿರ್ಭಿತಿ ಚಿಂತಕ, ನಿಷ್ಠೆಯ ಸಂಶೋಧಕ ಪ್ರಾಧ್ಯಾಪಕರ "ಶಿಷ್ಯತ್ವ" ಪಡೆದುದು ಒಂದು ಪುಣ್ಯಪ್ರಸಂಗ. ೧೯೫೦ - ೧೯೫೩ರ ಕಾಲದಲ್ಲಿ. ಪ್ರೊ. ಶ್ರೀಕಂಠಶಾಸ್ತ್ರೀಗಳ ಶಿಷ್ಯತ್ವ ನನಗೆ ದೊರಕಿತು. ಕನ್ನಡ ಆನರ್ಸ ತರಗತಿಯ ವಿದ್ಯಾರ್ಥಿಯಾದ ನನಗೆ ಹಾಗೂ ನನ್ನ ಸಹಪಾಠಿ ಮಿತ್ರರಾದ ಡಾ।। ಚಿದಾನಂದಮೂರ್ತಿ, ಡಾ।। ವೆಂಕಟಾಚಲ ಶಾಸ್ತ್ರಿ, ಪ್ರೊ. ಸುಜನಾ ಮುಂತಾದವರಿಗೆ ಕರ್ನಾಟಕ ಇತಿಹಾಸದ ಮತ್ತು ಸಂಸ್ಕೃತಿ ಅಧ್ಯಾಪಕರಾಗಿದ್ದ ಡಾ।। ಎಸ್. ಶ್ರೀಕಂಠಶಾಸ್ತ್ರೀಗಳು "ಕರ್ನಾಟಕ ಸಂಸ್ಕೃತಿ ಇತಿಹಾಸದ" ಪಾಠ ಮಾಡುತಿದ್ದರು. ಅವರ ಸಮಕಾಲೀನರಾದ ಮಹಾಕವಿ ಕುವೆಂಪು, ನಡೆಯುವ ವಿಶ್ವಕೋಶ'ವೆಂದೇ ಪ್ರಸಿದ್ಧರಾಗಿದ್ದ 'ಡಿ. ಎಲ್. ನರಸಿಂಹಾಚಾರ್ಯರು, ಜ್ಞಾನನಿಧಿಯೇ ಆಗಿದ್ದ ಫಿಲೊಸಫಿ ಪ್ರೊಫೆಸರ್ ಡಾ।। ಸಿ. ಜಿ. ಪುರುಷೋತ್ತಮ, ಅಂತರಾಷ್ಟ್ರೀಯ ಖ್ಯಾತಿಯ ಮನೋ ವಿಜ್ಞಾನಿ ಡಾ|| ಗೋಪಾಲಸ್ವಾಮಿ, ಇಂಡೋಲಜಿ ಪ್ರೊಫೆಸರ್ ನೀಲಕಂಠಶಾಸ್ತ್ರೀ, ಡಾ।। ಎಮ್. ವಿ. ಕೃಷ್ಣ ರಾವ್ ಮುಂತಾದ ಹತ್ತಾರು ರಾಜ್ಯಶಾಸ್ತ್ರದಪ್ರಾಚಾರ್ಯ ದಿಗ್ಗಜ ಪ್ರಾಧ್ಯಾಪಕರು ಮಹಾರಾಜ ಕಾಲೇಜಿನಲ್ಲಿದ್ದರು.
Former Professor and Head of the Department and Director of Kannada Studies (Karnatak University - Dharwad) - Dr S. M. Vrushabendra Swamy's biographical article on his teacher Dr S. Srikanta Sastri in his book "Shatamanada Kelavu Smaraneeyaru".
©

Sitting on chairs (L-R):
Dr S. Srikanta Sastri, M.R. Varadachar, Pattankar Chandrashekar Bhat, Lakshminarasimaiah, Prof.K.V.Puttappa (Kuvempu), Prof.A.R.Krishna Sastri, Ralapalli Anantha Krishna Sharma, Prof V.Seetharamaiah, Name Unknown, Name Unknown, S.V. Ratnam
Standing (First Row) (L-R): T.S. Shamarao, Name Unknown, Name Unknown, V. Raghavachar, K.S. Krishnamurthy, K.Venkataramappa, Name Unknown, Name Unknown, Name Unknown, Name Unknown, C.Mahadevappa, N.Anantarangachar
Standing (Last Row) (L-R):
U.K. Subbarayachar
Page 1 of 8
Click on link to read full article
%20Book%20Front%20Cover_JPEG.jpeg)
